ಸ್ಮಾರ್ಟ್ ಸಸ್ಟೇನ್ ಲೀಡ್ ಪ್ರಮಾಣೀಕರಿಸಿದ ಸುಸ್ಥಿರ, ಆರೋಗ್ಯಕರ ಮತ್ತು ಪರಿಸರ ಸ್ನೇಹಿ ಹಸಿರು ಕಟ್ಟಡಗಳ ಕಥೆಗಳನ್ನು ತೆರೆದಿಡುತ್ತಿದೆ, ಹಸಿರು ಕಟ್ಟಡಗಳ ನಿರ್ಮಾಣದಲ್ಲಿ ಮತ್ತು ಶ್ರೇಯಾಂಕದಲ್ಲಿ ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರಗಳು ಅಗ್ರ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದೆ.ಇದು ವಿಶ್ವದ ಇತರ ಭಾಗಗಳಿಗೆ ಉದಾಹರಣೆಯಾಗಿದೆ.
ಲೀಡ್ ಎಂದರೆ ಲೀಡರ್ ಶಿಪ್ ಇನ್ ಎನರ್ಜಿ ಆಂಡ್ ಎನ್ ವಿರಾನ್ ಮೆಂಟಲ್ ಡಿಸೈನ್, ಇದು ವಿಶ್ವದಲ್ಲಿ ಪರಿಸರ ಸ್ನೇಹಿ ಕಟ್ಟಡಗಳನ್ನು ಪ್ರಮಾಣೀಕರಿಸುವ ಕಾರ್ಯ ಮಾಡುತ್ತದೆ.
ಭಾರತದಲ್ಲೇ ಎರಡು ರಾಜ್ಯಗಳಲ್ಲಿ ನಮಗೆ ಹಸಿರು ಕಟ್ಟಡಗಳ ಉದಾಹರಣೆ ಸಿಗುತ್ತವೆ
Case study 1 : ಮಹಾರಾಷ್ಟ್ರವು 334 ಲೀಡ್-ಪ್ರಮಾಣೀಕೃತ ಹಸಿರು ಕಟ್ಟಡಗಳ ನಿರ್ಮಾಣದಲ್ಲಿ ಅಗ್ರಸ್ಥಾನದಲ್ಲಿದೆ
Case study 2 : ಈಗ ನಾವು ಕೊಯಮತ್ತೂರಿನಲ್ಲಿ ಲೀಡ್ ಪ್ರಮಾಣೀಕೃತ ವಿಶ್ವದ ಎರಡನೇ ಅತ್ಯುನ್ನತ ಹಸಿರು ಕಟ್ಟಡ ಇದೆ. ಭಾರತದ ಅತ್ಯುನ್ನತ ಶ್ರೇಣಿಯ ಪರಿಸರ ಸ್ನೇಹಿ ಕಟ್ಟಡ ಮತ್ತು ಇ-ಸೌಲಭ್ಯವನ್ನು ಇದರಲ್ಲಿ ಹೊಂದಿದ್ದೇವೆ
Case study 3 : ಕರ್ನಾಟಕದಲ್ಲಿರುವ ಇನ್ ಹ್ಯಾಬಿಟ್ ನ ಸ್ವಾವಲಂಬಿ ಕಟ್ಟಡಗಳು.
ಕರ್ನಾಟಕ ಮತ್ತು ತಮಿಳುನಾಡು 232 ಮತ್ತು 157 ಲೀಡ್-ಪ್ರಮಾಣೀಕೃತ ಕಟ್ಟಡಗಳ ನಿರ್ಮಾಣದೊಂದಿಗೆ ತಮ್ಮ ಜನರ ಜೀವನ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಿವೆ.
ಕೊಯಮತ್ತೂರಿನ ಹಸಿರು ಕಟ್ಟಡಗಳ ಇ-ಸೌಲಭ್ಯ/E-facility
ಇ-ಸೌಲಭ್ಯದಿಂದ ಹಸಿರು ಕಟ್ಟಡ ಸ್ಮಾರ್ಟ್ ಕಟ್ಟಡವಾಗಿದೆ.
ಭಾರತದಂತಹ ಸಂಪನ್ಮೂಲ ಬಿಕ್ಕಟ್ಟಿನ ರಾಷ್ಟ್ರದಲ್ಲಿ ಸ್ವಾವಲಂಬಿ ಕಟ್ಟಡಗಳನ್ನು ನಿರ್ಮಿಸುವುದು ನಿಜವಾಗಿಯೂ ಮುಖ್ಯ ಎಂದು ಮುಖ್ಯ ಸಲಹೆಗಾರ ಇನ್ಹಬಿಟ್ ಶ್ರೀ ಯೂಸುಫ್ ತರುಬ್ ಹೇಳಿದ್ದಾರೆ.
“ಹಸಿರು ಕಟ್ಟಡವನ್ನು ನಿರ್ಮಿಸಲು 20 ವರ್ಷಗಳ ಹಿಂದೆ ಉತ್ತಮ ಸಮಯವಾಗಿತ್ತು. ಆದರೆ ಎರಡನೇ ಅತ್ಯುತ್ತಮ ಸಮಯ ಈಗ ಬಂದಿದೆ,” ಎಂಬುದು ಕಂಪನಿಯ ಘೋಷ ವಾಕ್ಯವಾಗಿದೆ. ಇದು ಜೀವನ ವಿಧಾನವಾಗಿದೆ ಎಂದು ಸಂಸ್ಥೆಯು ಹೇಳುತ್ತದೆ.
ಸ್ವಯಂಚಾಲಿತ ಇ-ಸೌಲಭ್ಯ:
ಕೊಯಮತ್ತೂರಿನಲ್ಲಿರುವ ಸಿಯೆರಾ ಒಡಿಸಿ ಪ್ರೈವೇಟ್ ಲಿಮಿಟೆಡ್ ತನ್ನ ಇ-ಸೌಲಭ್ಯದ ಸಾಫ್ಟ್ ವೇರ್‌ನೊಂದಿಗೆ ಅದನ್ನು ಪರಿಸರ ಸ್ನೇಹಿಯಾಗಿ ಮಾಡುವುದು ಮಾತ್ರವಲ್ಲದೆ ವಿಶ್ವದ ಅತ್ಯಂತ ಸ್ಮಾರ್ಟೆಸ್ಟ್ ಕಟ್ಟಡವೂ ಆಗಿ ರೂಪುಗೊಂಡಿದೆ. ಪ್ರವೇಶದ್ವಾರದಲ್ಲಿ ಚಲಿಸಬಲ್ಲ ಸ್ವಯಂಚಾಲಿತ ಗೇಟ್ ಇದೆ, ಇದು ವಿದ್ಯುತ್ ಉಳಿತಾಯದ ಪ್ರಥಮ ಹೆಜ್ಜೆಯಾಗಿದೆ. ಅದು ಅಗತ್ಯವಿರುವಷ್ಟು ತೆರೆಯುತ್ತದೆ ಮತ್ತು ಗರಿಷ್ಠ ಸಮಯದಲ್ಲಿ ತೆರೆದಿರುತ್ತದೆ. ಸಂಪೂರ್ಣ ಸ್ವಯಂಚಾಲಿತವಾಗಿದೆ. ಭೇಟಿ ಮಾಡುವವವರನ್ನು ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಿದೆ. ಸ್ಮಾರ್ಟ್ ಕಾರ್ಡ್ ಹೊಂದಿರುವ ಜನರು ಪ್ರವೇಶವನ್ನು ಪಡೆಯಲು ದ್ವಾರದ ಕ್ಯಾಮೆರಾದ ಮುಂದೆ ಅದನ್ನು ತೋರಿಸಬೇಕು.
ಸೌರ ಶಕ್ತಿಯ ಅತ್ಯುತ್ತಮ ಬಳಕೆ :
ಸೌರಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ ವಿದ್ಯುತ್ ಮಿತ ಬಳಕೆ ಮಾಡಬಹುದಾಗಿದೆ. ಅಂತಹ ಕಾರ್ಯವನ್ನು ಹಸಿರು ಕಟ್ಟಡವು ಪರಿಣಾಮಕಾರಿಯಾಗಿ ಬಳಸುತ್ತದೆ. ಪಶ್ಚಿಮ ಮತ್ತು ಪೂರ್ವಕ್ಕೆ ಎದುರಾಗಿರುವ ಹೆಚ್ಚಿನ ಕಿಟಕಿಗಳು ಹೆಚ್ಚಿನ ಸೂರ್ಯನ ಬೆಳಕನ್ನು ವಿದ್ಯುತ್ ಬಳಕೆಗೆ ಮತ್ತು ದಿನದ ಹೆಚ್ಚಿನ ಅವಧಿಗೆ ಹೆಚ್ಚು ಬೆಳಕು ಪಡೆಯಲು ಅವಕಾಶ ಮಾಡಿಕೊಡುತ್ತವೆ. ಇನ್ ಹ್ಯಾಬಿಟ್ ಸಲಹಾ ಸಂಸ್ಥೆಯಿರುವುದರಿಂದ ಕಟ್ಟಡದಲ್ಲಿ ಅನೇಕ ಹೊಸ ಪರಿಸರ ಸ್ನೇಹಿ ಸೌಲಭ್ಯಗಳನ್ನು ಪರಿಚಯಿಸಿದೆ. ಸಂವೇದಕ-ಸಕ್ರಿಯ ದೀಪಗಳು ಗಮನ ಸೆಳೆಯುತ್ತವೆ. ಕಟ್ಟಡದ ಎಲ್ಲಾ ದೀಪಗಳು ಎಲ್ ಇಡಿ ಮತ್ತು ಪಾದರಸ ರಹಿತವಾಗಿವೆ.
ಶೂನ್ಯ ನೀರಿನ ಶೌಚಾಲಯಗಳು:
ವಾಣಿಜ್ಯ ನಗರಗಳಲ್ಲಿ ನೀರು ಶೌಚಾಲಯಗಳಲ್ಲೇ ಹೆಚ್ಚಾಗಿ ಪೋಲಾಗುತ್ತದೆ. ಹಸಿರು ಕಟ್ಟಡಗಳಲ್ಲಿನ ಶೂನ್ಯ ನೀರಿನ ಶೌಚಾಲಯ ವ್ಯವಸ್ಥೆಯು ಈ ನೀರಿನ ವ್ಯರ್ಥವನ್ನು ತಡೆಯುತ್ತದೆ. ಅಲ್ಲದೆ ಸಂವೇದಕ-ಸಕ್ರಿಯ ಟ್ಯಾಪ್ ಗಳು ಸಹ ನೀರಿನ ವ್ಯರ್ಥವನ್ನು ತಡೆಯಲು ಸಹಾಯ ಮಾಡುತ್ತವೆ. ಇನ್ ಹ್ಯಾಬಿಟ್ ನಿಂದ ರಚನೆಯಾದ ಸಿಯೆರಾ ಶೇ.100 ಇಂಗಾಲದ ತಟಸ್ಥತೆಯನ್ನು ಸಾಧಿಸುತ್ತದೆ.
ವಿದ್ಯುತ್ ಉತ್ಪಾದನೆಗೆ ಸೌರ ಫಲಕಗಳು:
ಈ ಸೌರ ಫಲಕಗಳನ್ನು ಸ್ವಯಂಚಾಲಿತ ಸ್ಪ್ರಿಂಕ್ಲಿಂಗ್ ಕೂಲಿಂಗ್ ವ್ಯವಸ್ಥೆಯ ಮೂಲಕ ಸ್ಥಾಪಿಸಲಾಗಿದೆ, ಅದು ಸೌರ ಫಲಕಗಳ ಮೂಲಕ ಮಿತಿಗಿಂತ ಕಡಿಮೆ ತಾಪಮಾನವನ್ನು ಹೀರಿಕೊಳ್ಳುತ್ತದೆ ಮತ್ತು ಅವುಗಳನ್ನು ಧೂಳಿನಿಂದ ಮುಕ್ತವಾಗಿರಿಸುತ್ತದೆ. ಅಲ್ಲದೆ ಇದು ದ್ಯುತಿವಿದ್ಯುಜ್ಜನಕ ಗಾಜಿನ ಫಲಕಗಳನ್ನು ಹೊಂದಿರುವ ದಕ್ಷಿಣ ಭಾರತದ ಏಕೈಕ ಕಟ್ಟಡವಾಗಿದೆ, ಇದು ವಿದ್ಯುತ್ ನ್ನೂ ಉತ್ಪಾದಿಸುತ್ತದೆ.
ಮಳೆ ನೀರು ಕೊಯ್ಲು :
ಮಳೆನೀರು ಕೊಯ್ಲಿನಿಂದ ಬರುವ ನೀರನ್ನು ಹನಿ ನೀರಾವರಿ ವ್ಯವಸ್ಥೆಯೊಂದಿಗೆ ಶೇ.25 ಭಾಗ ನೀರನ್ನು ಸಸ್ಯಗಳಿಗೆ ನೀರುಣಿಸಲು ಬಳಸಲಾಗುತ್ತದೆ. ಮಡಡಿಯ ಉದ್ಯಾನವು ಎಲೆಕ್ಟ್ರಾನಿಕ್ ಯಂತ್ರಗಳನ್ನು ಮಾತ್ರ ಒಳಗೊಂಡಿರುವ ಅಡುಗೆಮನೆಗೆ ಸಾವಯವ ತರಕಾರಿಗಳನ್ನು ಒದಗಿಸಲು ಉಪಯೋಗವಾಗಿದೆ. ಅಡುಗೆಮನೆಯ ಸಾವಯವ ತ್ಯಾಜ್ಯವನ್ನು ತೋಟಗಳಿಗೆ ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ. ಇಡೀ ಕಟ್ಟಡವು ಅತ್ಯುತ್ತಮವಾದ ಪರಿಸರ ಸ್ನೇಹಿಯಾಗಿದೆ.
ಕೊಯಮತ್ತೂರಿನಲ್ಲಿ ಲೀಡ್ ಪ್ರಮಾಣೀಕೃತ ವಿಶ್ವದ ಎರಡನೇ ಅತ್ಯುನ್ನತ ಹಸಿರು ಕಟ್ಟಡ ಇದೆ. ಇದು ಲೀಡ್ ನಿಂದ ಪ್ರಮಾಣಪತ್ರವನ್ನು ಪಡೆದ ಮತ್ತು ಪ್ಲಾಟಿನಂ ನಿಂದ ಪ್ರಮಾಣೀಕರಿಸಲ್ಪಟ್ಟ 164 ದೇಶಗಳ 90 ಸಾವಿರ ಕಟ್ಟಡಗಳಲ್ಲಿ 2 ನೇ ಅತ್ಯುತ್ತಮ ಹಸಿರು ಕಟ್ಟಡ ಅಂದರೆ ಪರಿಸರ ಸ್ನೇಹಿ ಕಟ್ಟಡವಾಗಿದೆ. ಇನ್ ಹ್ಯಾಬಿಟ್ ತಮ್ಮ ಹಸಿರು ಕಟ್ಟಡ ಯೋಜನೆಗಳ ಪಟ್ಟಿಯಲ್ಲಿ ಕೊಯಮತ್ತೂರು ಎಂಬ ರತ್ನವನ್ನು ಸೇರಿಸಿಕೊಂಡಿದೆ.
Click here to read this article on E-facility, Coimbatore in English /ಇಂಗ್ಲೀಷ್
Add Comment